UV Listen
UV Listen
UVLISTEN
Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.
S1 ep 103 ಗುಣಗಳೆಂದರೆ ಏನು ಮತ್ತು ಅವು ಏಕೆ ಮುಖ್ಯ
ಪುರಾತನವಾದ ಹಿಂದೂ ಧರ್ಮ ತನ್ನನ್ನು ತಾನು ಬದಲಾವಣೆಗಳಿಗೆ ಒಡ್ಡಿಕೊಂಡಿದೆ. ಇಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಪ್ರತೀ ಹಂತದಲ್ಲೂ ಹೇಳಿಕೊಡಲಾಗುತ್ತದೆ. ಅವುಗಳಲ್ಲಿ ಗುಣಗಳೂ ಒಂದು. ಈ ಗುಣಗಳಲ್ಲಿ ಎಷ್ಟು ವಿಧ ಹಾಗೂ ಯಾವುವು. ಇವುಗಳು ಮನುಷ್ಯನ ವ್ಯಕ್ತಿತ್ವವನ್ನು ಹೇಗೆ ನಿರ್ಧರಿಸುತ್ತದೆ ಎಂಬುವುದನ್ನು ಕೇಳೋಣ
Apr 1, 2024
6 min
S1 EP 127 ಇಚ್ಛಾಶಕ್ತಿಯಿಂದ ಗೆಲುವು ನಿಶ್ಚಿತ
ಇಚ್ಚಾಶಕ್ತಿ ನಮ್ಮ ಸಕ್ಸೆಸ್‌ಗೆ ಕಾರಣವಾಗಬಹುದಾ? ಇಚ್ಛಾಶಕ್ತಿಯಿಂದ ನಾವು ಏನನ್ನ ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ಸಾಕ್ಷಿಯಾಗಿ ಅನೇಕ ಸಾಧಕರಿದ್ದಾರೆ. ಅವರೆಲ್ಲರೂ ನಮಗೆ Inspiration. ಬನ್ನಿ ಇಚ್ಛಾಶಕ್ತಿಯಿಂದ ಹೇಗೆ ಗೆಲುವು ಸಾಧ್ಯ ಅನ್ನೋದನ್ನ ನಾವಿವತ್ತಿನ ಸಂಚಿಕೆಯಲ್ಲಿ ತಿಳೀದುಕೊಳ್ಳೋಣ.
Mar 25, 2024
8 min
S1 EP 126 ಪ್ರಯತ್ನಿಸಿದವನಿಗೆಂದಿಗೂ ಸೋಲಿಲ್ಲ
ಗೆಲುವಿನ ಶಿಖರವನ್ನೇರಲು ಪ್ರಯತ್ನ ಅನಿವಾರ್ಯವೇ? ಪ್ರಯತ್ನಿಸದೇ ಗೆಲುವು ಅನ್ನೋದು ಸಾಧ್ಯವೇ? ಇಂತಹ ಅನೇಕ ಪ್ರಶ್ನೆಗಳು ನಮ್ಮ ತಲೆಯಲ್ಲಿ ಓಡುತ್ತಲೇ ಇರುತ್ತದೆ. ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ, ಸಕ್ಸೆಸ್‌ನ ಸಿಕ್ರೆಟ್‌ ಒಂದರ ಬಗ್ಗೆ ತಿಳಿಯುವ ಸಂಚಿಕೆ ಇವತ್ತಿನದು..
Feb 24, 2024
8 min
S1 EP 102 ಭಕ್ತಿಯ ಒಂಬತ್ತು ರೂಪಗಳು ಯಾವುವು? | What are the nine forms of devotion?
ಭಕ್ತಿ ಮರದಂತೆ.. ನಾವು ಮರಕ್ಕೆ ನೀರು ಹಾಕಿದಾಗ ಅದು ಹೇಗೆ ಫಲ ನೀಡುತ್ತದೆಯೋ ಅದೇ ರೀತಿ ಭಕ್ತಿಗೆ ನಾವು ಪ್ರಾಮುಖ್ಯತೆಯನ್ನು ನೀಡಿದಷ್ಟು ಆಳವಾದ ಚಿಂತನೆಗಳು ಬೆಳೆಯುತ್ತಾ ಹೋಗುತ್ತವೆ. ಹಾಗಾದರೆ ನಿಜವಾಗಿಯೂ ಭಕ್ತಿಯೆಂದರೇನು..? ಭಕ್ತಿಯ 9 ರೂಪಗಳಾವುವು..? ಪುರಾಣದಲ್ಲಿ, ಪ್ರಹ್ಲಾದನು ತನ್ನ ಗುರುಗಳು ತನಗೆ ಕಲಿಸಿದ ಭಕ್ತಿಯ ಒಂಬತ್ತು ರೂಪಗಳನ್ನು ಅಂದರೆ ನವವಿಧ ಭಕ್ತಿಗಳನ್ನು ತನ್ನ ತಂದೆ ಹಿರಣ್ಯ ಕಶ್ಯಪುವಿಗೆ ವಿವರಿಸುತ್ತಾನೆ. ಅವುಗಳೆಂದರೆ ಶ್ರವಣ, ಕೀರ್ತನ, ಸ್ಮರಣೆ, ಪಾದ-ಸೇವೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ ಮತ್ತು ಆತ್ಮ-ನಿವೇದನೆ. ಇವುಗಳ ಬಗ್ಗೆ ತಿಳಿದುಕೊಳ್ಳುವ ಸಂಚಿಕೆ ಇಂದಿನದು. ಭಕ್ತಿಯ ಮೊದಲ ಪ್ರಕಾರ ​ಶ್ರವಣ, ಅಂದ್ರೆ ದೇವರ ಹೆಸರುಗಳು, ಕಥೆಗಳು ಮತ್ತು ಲೀಲೆಗಳನ್ನು ಕೇಳುವುದು. ಇದರಿಂದ ಆ ವ್ಯಕ್ತಿಯು ದೇವರಿಗೆ ಹತ್ತಿರವಾಗುತ್ತಾನೆ ಅನ್ನೋದು ನಮ್ಮ ನಂಬಿಕೆ. ಅದರ ಅತೀಂದ್ರಿಯ ಅರ್ಥವೆಂದರೆ ಅನಾಹದ ಶಬ್ದವನ್ನು ಕೇಳುವುದು, ಇದು ನಮ್ಮೊಳಗೆ ನಿರಂತರವಾಗಿ ಪ್ರತಿಧ್ವನಿಸುವ ಶಬ್ದವಾಗಿರುತ್ತದೆ. ಸಂಗೀತ ವಾದ್ಯಗಳನ್ನು ಬಳಸುವುದು ಮತ್ತು ಹೆಚ್ಚಾಗಿ ಗುಂಪಿನಲ್ಲಿ ಶ್ಲೋಕಗಳನ್ನು ಅಥವಾ ಕೀರ್ತನೆಗಳನ್ನು ಪಠಿಸುವ ಅಥವಾ ಹಾಡುವ ಮೂಲಕ ದೇವರನ್ನು ಮೆಚ್ಚಿಸುವುದನ್ನ ಕೀರ್ತನ ಅಂತ ಹೇಳಲಾಗತ್ತೆ. ಇದು ಭಕ್ತಿಯ ಎರಡನೇ ಪ್ರಕಾರ. ಕೀರ್ತನವು ಉತ್ತಮವಾದ ಭಾವನೆಗಳನ್ನು ಮತ್ತು ದೈವಿಕ ನಂಬಿಕೆಯನ್ನು ಉತ್ತೇಜಿಸುವ ಶಕ್ತಿಯನ್ನು ಹೊಂದಿದೆ. ದೇವರಿಗೆ ತಮ್ಮ ಭಕ್ತಿಯನ್ನ ವ್ಯಕ್ತಪಡಿಸುವ ಒಂದು ವಿಧಾನ ಅಂತಲೇ ಹೇಳಬಹುದು. ಇನ್ನು ಮೂರನೇ ಭಕ್ತಿಯ ಪ್ರಕಾರವಾದ ಸ್ಮರಣೆಯಲ್ಲಿ, ಭಕ್ತನು ಭಗವಂತನ ನಾಮ ಮತ್ತು ರೂಪಗಳನ್ನು ಸ್ಮರಿಸುತ್ತಾನೆ. ಇದು ಕಥೆಗಳನ್ನು ನೆನಪಿಸಿಕೊಳ್ಳುವುದು, ದೇವರ ಮಹಿಮೆಯ ಬಗ್ಗೆ ಇತರರಿಗೆ ಕಲಿಸುವುದು, ದೇವರ ಅಂಶಗಳನ್ನು ಧ್ಯಾನಿಸುವುದು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ದೇವರನ್ನು ಸ್ಮರಿಸುವ ಇನ್ನೊಂದು ವಿಧಾನವೆಂದರೆ ಜಪ. ದೇವರನ್ನು ಸ್ಮರಿಸುವುದು ನಮ್ಮನ್ನು ಯಾವಾಗಲೂ ದೇವರಿಗೆ ಹತ್ತಿರವಾಗಿಸುತ್ತದೆ. ಸ್ಮರಣೆ ಒಂದು ಕಠಿಣ ರೂಪವಾಗಿದ್ದು, ಅದಕ್ಕೆ ಮನಃಪೂರ್ವಕತೆಯ ಅಗತ್ಯವಿರುತ್ತದೆ. ​ಪಾದ-ಸೇವೆ ಭಕ್ತಿಯ ನಾಲ್ಕನೇ ಪ್ರಕಾರ. ನಮ್ಮ ಸೇವೆಯನ್ನು ಭಗವಂತನ ಅಥವಾ ಗುರುಗಳ ಪಾದದಲ್ಲಿ ಅರ್ಪಿಸುವಂತದ್ದಾಗಿದೆ. ಒಂದು ವೇಳೆ ಗುರುಗಳು ಅಥವಾ ದೇವರ ವಿಗ್ರಹ ಇಲ್ಲದಿದ್ದರೆ, ಅವನ ದೈವಿಕ ಅನುಗ್ರಹವನ್ನು ಪ್ರತಿನಿಧಿಸುವ ಅವನ ಪಾದುಕೆಗಳಿಗೆ ನಮಸ್ಕಾರವನ್ನು ಮಾಡಬಹುದು. ಪಾದ ಸೇವೆಯು ವ್ಯಕ್ತಿಗೆ ತಾಳ್ಮೆಯನ್ನು ಕಲಿಸುತ್ತದೆ. ದೇವರ ಆಶೀರ್ವಾದ ಪಡೆಯಲು ಅರ್ಚನೆ – ಪೂಜೆ ಮಾಡುತ್ತಾರೆ. ಇದು ಭಕ್ತಿಯ ಐದನೇ ವಿಧವಾಗಿದೆ. ಸಾಂಪ್ರದಾಯಿಕವಾಗಿ ಇದನ್ನು ಷೋಡಶೋಪಚಾರ ಅಥವಾ ಹದಿನಾರು ವಿಧಾನಗಳಿಂದ ಮಾಡುವ ಪೂಜೆಯಾಗಿದೆ. ಒಬ್ಬರು ದೇವರ ಆವಾಹನೆ, ಆಸನ, ಸ್ನಾನ, ಅಲಂಕಾರ, ಗಂಧ ಲೇಪನ, ಅರ್ಪಣೆ ಮೊದಲಾದ 16 ರೀತಿಯ ಉಪಚಾರಗಳನ್ನು ಮಾಡಲಾಗುತ್ತದೆ. ಇದೂ ಒಂದು ಭಕ್ತಿಯ ಪ್ರಾಕಾರವಷ್ಟೆ. ಆದರೆ ಇದನ್ನ ಶ್ರದ್ಧೆಯಿಂದ ಮಾಡಿದವನು ದೇವರಿಗೆ ಹತ್ತಿರವಾಗುತ್ತಾನೆ. ಕೃತಜ್ಞತೆಯನ್ನು ವ್ಯಕ್ತಪಡಿಸುವ ಭಕ್ತಿಯ ಪ್ರಾಕಾರವೇ ವಂದನೆ. ಅಂದರೆ, ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಲುವಾಗಿ ದೇವತೆ, ಗುರುವಿನ ಮುಂದೆ ಸಾಷ್ಟಾಂಗ ನಮಸ್ಕಾರವನ್ನು ಮಾಡುವುದಾಗಿದೆ. ನಮ್ರತೆಯಿಂದ ನಮಸ್ಕರಿಸುವುದು ಮತ್ತು ಸಾಷ್ಟಾಂಗ-ನಮಸ್ಕಾರ ಅಂದರೆ ಎಂಟು ಅಂಗಗಳಿಂದ ಭೂಮಿಯನ್ನು ಸ್ಪರ್ಶಿಸಿ, ನಂಬಿಕೆ ಮತ್ತು ಗೌರವದಿಂದ, ದೇವರ ಪ್ರತಿಮೆಯ ಮುಂದೆ ನಮಸ್ಕರಿಸುವುದಾಗಿದೆ. ದಾಸ್ಯ ಇದು ಭಕ್ತಿಯ ಏಳನೇ ವಿಧಾನವಾಗಿದೆ. ದಾಸ್ಯ ಅನ್ನೋ ಸಂಸ್ಕೃತ ಪದದ ಅರ್ಥ ಸೇವೆ ಅಥವಾ ಗುಲಾಮಗಿರಿ ಅಂತ. ದಾಸ್ಯವು ದಾಸ್ಯದ ಮೂಲಕ ವ್ಯಕ್ತಪಡಿಸುವ ದೇವರ ಮೇಲಿನ ಪ್ರೀತಿ ಮತ್ತು ಭಕ್ತಿ. ಅಂದರೆ ದೇವರನ್ನು ಅಥವಾ ಗುರುವನ್ನು ಸಮರ್ಪಣಾ ಭಾವದಿಂದ ಸೇವೆ ಮಾಡುವುದು. ದೇವಸ್ಥಾನವನ್ನು ಶುಚಿಗೊಳಿಸುವುದು, ಬಡವರ ಸೇವೆ ಮಾಡುವುದು, ಧರ್ಮಗ್ರಂಥಗಳನ್ನು ಧ್ಯಾನಿಸುವುದು ಅಥವಾ ದೇವರ ಸೇವಕನಾಗಿ ಯಾವುದೇ ಕೆಲಸವನ್ನು ಮಾಡುವುದು, ಇದನ್ನ ದಾಸ್ಯದ ಭಕ್ತಿ ಅಂತ ಹೇಳಲಾಗತ್ತೆ. ಭಕ್ತಿಯ ಎಂಟನೇ ವಿಧಾನ ಸಖ್ಯ ಭಕ್ತಿ, ಅಂದರೆ ದೇವರೊಂದಿಗೆ ಸ್ನೇಹಿತರಾಗುವುದು ಅಂತರ್ಥ. ಆತ್ಮೀಯ ಸ್ನೇಹಿತರಂತೆ, ಭಕ್ತನು ಯಾವಾಗಲೂ ದೇವರೊಂದಿಗೆ ಒಟ್ಟಿಗೆ ಇರುತ್ತಾನೆ ಮತ್ತು ತನ್ನಂತೆಯೇ ಅವನನ್ನು ಪ್ರೀತಿಸುತ್ತಾನೆ ಅಂತ ನಂಬುವ ಒಂದು ವಿಧಾನ. ಭಕ್ತನು ದೇವರಿಗಾಗಿ ಏನ್‌ ಬೇಕಾದ್ರು ಮಾಡೋದಕ್ಕೆ ರೆಡಿ ಇರ್ತಾನೆ ಅಂತಹ ದೃಢವಾದ ಭಕ್ತಿ ಈ ಸಖ್ಯ ಭಕ್ತಿ. ವಿಭೀಷಣ, ಉದ್ಧವ, ಸುಗ್ರೀವ, ಸುದಾಮ, ಅರ್ಜುನ, ಇತ್ಯಾದಿ, ಈ ರೀತಿಯ ಭಕ್ತಿ ಅಥವಾ ಸಖ್ಯ ಭಾವವನ್ನು ವ್ಯಕ್ತಪಡಿಸಿದ ಭಕ್ತರ ಉದಾಹರಣೆಗಳಾಗಿವೆ. ​ಇನ್ನು ಕೊನೆಯ ಭಕ್ತಿಯ ವಿಧಾನ ಆತ್ಮ-ನಿವೇದನೆ, ಇದರಲ್ಲಿ ಭಕ್ತನು ತನ್ನ ದೇಹ, ಮನಸ್ಸು ಮತ್ತು ಆತ್ಮವನ್ನು ದೇವರಿಗೆ ಅರ್ಪಿಸುತ್ತಾನೆ ಮತ್ತು ಅವನಲ್ಲಿ ಆಶ್ರಯ ಪಡೆಯುತ್ತಾನೆ ಅನ್ನೋ ಭಾವ ಈ ಭಕ್ತಿಯದು. ಅದು ಸಂತೋಷವಾಗಲಿ, ದುಃಖವಾಗಲಿ, ಭಕ್ತನು ಅದನ್ನು ದೇವರ ಉಡುಗೊರೆಯಾಗಿ ನೋಡುತ್ತಾನೆ. ಅವನು ತನ್ನನ್ನು ದೇವರ ಸಾಧನವಾಗಿ ನೋಡುತ್ತಾನೆ. ಇದುವೇ ಆತ್ಮ ನಿವೇದನೆಯಾಗಿದೆ ಅಂತ ಹೇಳ್ತಾ ಇಂದಿನ ಸಂಚಿಕೆಗೆ ಪೂರ್ಣವಿರಾಮವನ್ನಿಡ್ತಾ ಇದೀನಿ.
Feb 12, 2024
9 min
S1 EP 125 ಸಕ್ಸೆಸ್‌ಗೆ ಸೂತ್ರಗಳು ಸಾವಿರ. ಸಾವಿರದಲ್ಲಿ ಇನ್ನೊಂದಿಷ್ಟನ್ನ ನಾವು ಈ ಸೀಸನ್‌ನಲ್ಲಿ ಕೇಳೋಣ
Success ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ರೀತಿ. ನಮ್ಮ ಸಮಾಜದಲ್ಲಿ ಸೋತು ಗೆದ್ದವರು ಒಂದು ಕಡೆಯಾದರೆ, ಗೆದ್ದು ಸೋತವರ ಪಂಗಡ ಇನ್ನೊಂದು ಕಡೆ. ಎರಡು ಪಂಗಡದವರ ಕಥೆಯೂ ನಮಗೆ ಸ್ಪೂರ್ತಿದಾಯಕವೇ… ಸೋತು ಗೆದ್ದರೆ ಅದಕ್ಕೊಂದು ಬೆಲೆ ಅನ್ನೋದು ನಮ್ಗೆಲ್ಲರಿಗೂ ಗೊತ್ತಿರೋ ಸಂಗತಿ. ಅದೆಷ್ಟೋ famous ವ್ಯಕ್ತಿಗಳು ಸೋತು ಗೆದ್ದಿದ್ದಾರೆ, ಉದಾಹರಣೆಯಾಗಿ ಹೇಳ್ಬೇಕು ಅಂದ್ರೆ ಅಮಿತಾಬ್‌ ಬಚ್ಚನ್‌, ಎಷ್ಟೋ ರಿಜೆಕ್ಷನ್‌ಗಳ ನಂತರ ಅವರು ಇಷ್ಟು ಫೇಮಸ್‌ ಆಗೋದಕ್ಕೆ ಸಾಧ್ಯ ಆಯಿತು. ಕೇಳಿ..
Feb 5, 2024
8 min
S1 EP 114 ಹಿಂದೂ ಮಹಾಗ್ರಂಥಗಳು.
ಹಿಂದೂ ಮಹಾಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತ ಜೀವನಾದರ್ಶಗಳು ಮಾರ್ಗದರ್ಶನವನ್ನ ನೀಡುತ್ತವೆ ಅನ್ನೋದನ್ನ ನಾವು ನಂಬಿಕೊಂಡು ಬಂದಿದ್ದೇವೆ. ಇವುಗಳು ಸಂಸ್ಕೃತದ ಮಹಾಕಾವ್ಯಗಳೂ ಹೌದು. ಇವುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವ ಸಂಚಿಕೆ ಇದು.
Jan 1, 2024
10 min
S1 EP100 ವೇದ ಅಂದ್ರೆ ಏನು ?
ಹಿಂದೂ ಧರ್ಮದ ಇತಿಹಾಸವು ಹಲವು ವರ್ಷಗಳಷ್ಟು ಹಳೆಯದಾಗಿದೆ ಮತ್ತು ಅದರ ಅತ್ಯಂತ ಸರಿಯಾದ ಮತ್ತು ನಿಖರವಾದ ಪುರಾವೆಗಳು ನಮ್ಮ ವೇದ ಹಾಗೆನೇ ಪುರಾಣಗಳಲ್ಲಿ ಮಾತ್ರ ಕಾಣಸಿಗುತ್ತವೆ. ಆದ್ದರಿಂದ ವೇದ ಅಂದ್ರೇನು ಅನ್ನೋದಕ್ಕೆ ಉತ್ತರವನ್ನು ಹುಡುಕ್ತಾ ಹೋಗೋಣ… ಕೇಳಿ ..
Dec 11, 2023
9 min
S1 EP 124 ಹಲವು ದೇಶಗಳಲ್ಲಿ ತಮ್ಮದೇ ಛಾಪು ಮೂಡಿಸಿದ ಸಮೀರ್ ಅರೋರ
ಭಾರತದಲ್ಲಿ ಇಂಜಿನಿಯರಿಂಗ್ ಮಾಡಿದ ಆರೋರಾ ಲಂಡನ್ ನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ಆ... ಕಂಪೆನಿ ಯಿಂದ ತಮ್ಮ ವೃತ್ತಿ ಜೀವನವನ್ನು ಆರಂಭಿಸ್ತಾರೆ ಅಷ್ಟೇ ಅಲ್ಲದೆ ಅಲ್ಲಿ ಹೊಸ ಟೆಕ್ನಾಲಜಿಯನ್ನು ಕಂಡುಹಿಡಿಯುತ್ತಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳನ್ನು ಮಾಡ್ತಾ ಅರೋರಾ ಬೇರೆ ಬೇರೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಸಿ.ಈ.ಓ ಆಗಿ ಹಲವು ದೇಶಗಳಲ್ಲಿ ತಮ್ಮದೇ ಛಾಪು ಮೂಡಿಸಿದ....
Dec 3, 2023
6 min
S1 EP 99 ಸಂಖ್ಯೆ ಗಳಿಗೂ ಭಾರತೀಯ ಪರಂಪರೆಗೂ ಇರುವ ಸಂಬಂಧ
ಹಿಂದೂ ಧರ್ಮಗ್ರಂಥಗಳು ಹಾಗೂ ಪುರಾಣಗಳ ಪ್ರಕಾರ ಜಗತ್ತು ನಾಲ್ಕು ಮುಖ್ಯ ಯುಗಗಳಿಂದ ಕೂಡಿದೆ. ಅವುಗಳು ಯಾವುವು ಅವುಗಳ ಪ್ರಾಮುಖ್ಯತೆ ಏನು ಎಂಬ ಸುಂದರ ವಿಚಾರ ಕೇಳಿ
Nov 6, 2023
9 min
S1 EP123 ಭಾರತದ ಮಿತ್ತಲ್ ವಿಶ್ವದ ಅತೀ ಶ್ರೀಮಂತ ಉದ್ಯಮಿಯಾದ ಕಥೆ
ಸಣ್ಣ ಉದ್ಯಮವಾಗಿ ಆರಂಭಿಸಿದ ಕಂಪೆನಿಯೊಂದು ವಿಶ್ವದ ಪ್ರಮುಖ ಕಂಪೆನಿಗಳಲ್ಲೊಂದಾಗುವಂತೆ ಮಾಡಿದ ಮಿತ್ತಲ್ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು. ಭಾರತ ಮತ್ತು ಬ್ರಿಟನ್ನಿನ ಪ್ರಖ್ಯಾತ ಉದ್ಯಮಿಯಾಗಿರುವ ಲಕ್ಷ್ಮೀನಾರಾಯಣ ಮಿತ್ತಲ್ ಅವರ ಕಥೆ ಕೇಳಿ
Oct 29, 2023
6 min
Load more