
Mankutimmana Kagga - 581-582
ದೇವರದಿದೆಲ್ಲ ದೇವರಿಗೆಲ್ಲವೊಂದೊರಲು- ।
ತಾವುದನುಮವನ ನಿರ್ಣಯಕೆ ಬಿಡದೆಯೆ ತಾಂ ।।
ದಾವಂತಬಡುತ ತನ್ನಿಚ್ಚೆಯನೆ ಘೋಷಿಸುವ ।
ಭಾವವೆಂತಹ ಬಕುತಿ ? – ಮಂಕುತಿಮ್ಮ ।। 581
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ ।
ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ ।।
ಕೊರೆಯಾದೊಡೇನೊಂದು, ನೆರೆದೊಡೇನಿನ್ನೊಂದು?।
ಒರಟು ಕೆಲಸವೋ ಬದುಕು – ಮಂಕುತಿಮ್ಮ || 582
This podcast uses Anchor (from Spotify) for stats, tracking, and dynamic audio. What this means Episodes play from the podcast's own servers, unmodified. Not affiliated with Podbay.
