Sanatana Spiritual Society
Sanatana Spiritual Society
Girish Chandra Ananthanarayana
In this podcast, I would love to cover various aspects of Sanatana Dharma - from simple shlokaas for Children to Mankutimmana Kagga to Vishnu Sahasranama to Suktaas to Bhagawad Gita.
Mankutimmana Kagga 187
ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆಬಿಡಿಜೀವ ಸಂಗಾತಿಜೀವಗಳನರಸಿಪಡೆದಂದು ಪೂರ್ಣವದು – ಮಂಕುತಿಮ್ಮ
Jan 11, 2024
11 min
Mankutimmana Kagga 566
ಆರಣ್ಯಕದ ಪುಷ್ಪಗಳ ಮೂಸುವವರಾರು? । ಆರಿಹರು ಪತಗದುಡುಪನು ಹುಡುಕಿ ಮಚ್ಚಲ್? ॥ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ । ಸ್ವಾರಸ್ಯವೆಸಗುವಳೊ! – ಮಂಕುತಿಮ್ಮ ॥ ೫೬೬ ॥
Jan 10, 2024
8 min
Mankutimmana Kagga 553
ಚೂರುಗಳು ಹದಿನಾರು ಚಂದ್ರಮಂಡಲಕಂತೆ ।ನೂರಾರು ಚೂರುಗಳು ಸತ್ಯಚಂದ್ರನವು ।।ಸೇರಿಸುತಳವುಗಳನು ಬಗೆಯರಿತು ಬೆಳೆಸುತಿರೆ ।ಸಾರ ಋತಪೂರ್ಣಿಮೆಯೊ – ಮಂಕುತಿಮ್ಮ ।।
Jan 9, 2024
9 min
Mukundamala Stotra
Mukunda mAla stotram: Gita-God-Hinduism: MukundamAla Stotram 
Oct 18, 2021
21 min
Mankutimmana Kagga - 84
ಅಣು ಭೂತ ಭೂಗೋಳ ತಾರಾಂಬರಾದಿಗಳ | ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ || ಕುಣಿಸುತಿರುವನು ತನ್ನ ಕೃತಿಕಂತುಕವನದರೊ|| ಳಣಗಿರ್ದು ಪರಬೊಮ್ಮ – ಮಂಕುತಿಮ್ಮ || 84 ಅಣು = ಅತ್ಯನ್ತ ಸಣ್ಣದಾದದ್ದು ಭೂತ = (ಇಲ್ಲಿ) ಬೃಹತ್ತಾದದು, ತಾರಾಂಬರಾದಿಗಳ = ನಕ್ಷತ್ರ ಗಗನಗಳು, ಅಣಿಮಾಡಿ = ಸಿದ್ಧಪಡಿಸಿ, ಬಿಗಿದು = ಒಂದು ಸೂತ್ರದಲ್ಲಿ ಬಂದಿಸಿ, ನಸು = ಸ್ವಲ್ಪ, ಸಡಿಲವನುಮಿರಿಸಿ = ಸಡಿಲವನು ಇರಿಸಿ, ಕೃತಿಕಂತುಕವನದರೊಳಣಗಿರ್ದು= ಅವನು ಮಾಡಿದ ಈ ಸೃಷ್ಟಿಯೆಂಬ ಚೆಂಡಿನೊಳಗೆ ತಾನೂ ಸೇರಿಕೊಂಡು.
Aug 3, 2021
7 min
Mankutimmana Kagga - 361
ಧಾರಿಣಿಯ ವಾಸಿಗಳ್ಗಿಹುದೊಂದು ಹಿತವಾರ್ತೆ | ಆರವ್ಯುದಾರ್ತರ್ ಅತ್ಯಾರ್ತರಾಪದವ॥ ರೌರವಿಗೆ ಹಿತ ಮಹಾರೌರವಿಯ ಗೋಳುದನಿ । ನಾರಕದೊಳದುಪಾಯ – ಮಂಕುತಿಮ್ಮ ॥ 361 ವಾಸಿಗಳ್ಗಿಹುದೊಂದು = ವಾಸಿಗಳಿಗೆ+ಇಹುದು+ಒಂದು, ಆರವ್ಯುದಾರ್ತರ್ = ಆರವ್ಯುದು+ಆರ್ತರ್, ಅತ್ಯಾರ್ತರಾಪದವ = ಅತಿ+ಆರ್ತರ+ಆಪದವ, ನಾರಕದೊಳುದುಪಾಯ= ನಾರಕದೊಳು+ಅದು+ಉಪಾಯ. ಧಾರಿಣಿ = ಭೂಮಿ, ಜಗತ್ತು, ಆರವ್ಯುದು = ವಿಚಾರಮಾಡುವುದು,ಆರ್ತರ್=ಸಂಕಟದಿಂದ ಗೋಳಾಡುವವರು, ಅತ್ಯಾರ್ತರ್= ಅತಿಯಾಗಿ ಗೋಳಾಡುವವರು, ರೌರವಿ=ನರಕದಂತ ಕಷ್ಟ ಅನುಭವಿಸುವವನು, ನಾರಕದೊಳುದುಪಾಯ=ಹಿಂಸೆಯಲ್ಲೂ ಒಂದು ಉಪಾಯ.
Jul 22, 2021
7 min
Mankutimmana Kagga - 451
ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ । ಶೈಲದಚಲತೆಯಿರಲು ಝರಿಯ ವೇಗ ಸೊಗ ।। ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು । ವೈಲಕ್ಷಣದೇ ಚೆಂದ – ಮಂಕುತಿಮ್ಮ ।। 451 ವಿಸ್ತರವಿರಲು=ವಿಸ್ತರವು+ಇರಲು ಶೈಲದಚಲತೆಯಿರಲು=ಶೈಲದ ಅಚಲತೆ+ಇರಲು, ಬಯಲಂತಿರಲು=ಬಯಲಂತೆ+ಇರಲು, ಮನೆಯಚ್ಚುಕಟ್ಟಿಂಬು=ಮನೆಯ+ಅಚ್ಚುಕಟ್ಟು+ಇಂಬು ನೀಲ=ಆಕಾಶ, ಸೊಗ=ಸೊಗಸು-ಚೆಂದ, ಝರಿಯ= ದುಮ್ಮಿಕ್ಕುವ ಜಲಪಾತ, ವೈಲಕ್ಷಣದೇ=ವೈವಿಧ್ಯತೆಯೇ
Jul 19, 2021
6 min
Mankutimmana Kagga - 156
ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ | ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ || ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ | ಬಾಯ ಚಪ್ಪರಿಸುವನು – ಮಂಕುತಿಮ್ಮ || 156 ಈಯವನಿಯೊಲೆಯೊಳೆಮ್ಮಯ = ಈ + ಅವನಿ + ಒಲೆಯೊಳು + ಎಮ್ಮಯ// ಬಾಳನಟ್ಟು = ಬಾಳನು + ಅಟ್ಟು
Jul 18, 2021
7 min
Mankutimmana Kagga - 535
ನೀರ ನೆರೆ ತನ್ನೆದುರಿನಣೆಕಟ್ಟನೊಡೆಯುವುದು । ಊರನದು ಕೊಚ್ಚುವುದು ಬದಿಯ ಕಟ್ಟದಿರೆ ।। ಏರಿಗಳನಿಕ್ಕೆಲದಿ ನಿಲಿಸೆ ಹರಿಯುವುದು ಸಮನೆ । ಪೌರುಷದ ನದಿಯಂತು – ಮಂಕುತಿಮ್ಮ ।। 535 ।। ತನ್ನೆದುರಿನಣೆಕಟ್ಟನೊಡೆಯುವುದು – ತನ್ನ+ಎಂದುರಿನ+ಅಣೆಕಟ್ಟನ್ನು+ಒಡೆಯುವುದು, ಊರನದು = ಊರನ್ನು+ಅದು, ಕಟ್ಟದಿರೆ=ಕಟ್ಟದೆ+ಇರೆ, ಏರಿಗಳನಿಕ್ಕೆಲದಿ =ಏರಿಗಳನು+ಇಕ್ಕೆಲದಿ,ನದಿಯಂತು=ನದಿಯು+ಅಂತು, ನೆರೆ=ಪ್ರವಾಹ, ಬದಿಯ=ಪಕ್ಕದ, ಇಕ್ಕೆಲದಿ=ಎರಡೂ ಕಡೆ, ನಿಲಿಸೆ=ನಿಲ್ಲಿಸಲು, ಪೌರುಷದ=ಶಕ್ತಿಯ
Jul 13, 2021
7 min
Mankutimmana Kagga -132-131
ರಾಮನುಚ್ವಾಸವಲೆದಿರದೆ ರಾವಣನೆಡೆಗೆ | ರಾಮನುಂ ದಶಕಂಠನೆಲರನುಸಿರಿರನೆ || ರಾಮರಾವಣರಿಸಿರ್ಗಳಿಂದು ನಮ್ಮೊಳಗಿರವೇ? | ಭೂಮಿಯಲಿ ಪೋಸತೇನೋ ? – ಮಂಕುತಿಮ್ಮ || 132 || ರಾಮನುಚ್ವಾಸವಲೆದಿರದೆ = ರಾಮನ + ಉಚ್ವಾಸವು+ ಅಲೆದಿರದೆ// ರಾವಣನೆಡೆಗೆ = ರಾವಣನ ಎಡೆಗೆ//ದಶಕಂಠನೆಲರನುಸಿರಿರನೆ = ದಶ + ಕಂಠನ + ಎಲರನು+ ಉಸಿರಿರನೆ// ರಾಮರಾವಣರುಸಿರ್ಗಳಿಂದು = ರಾಮ + ರಾವಣರ + ಉಸಿರುಗಳು + ಇಂದು // ನಮ್ಮೊಳಗಿರವೇ = ನಮ್ಮೊಳಗೇ + ಇರವೇ // ಪೋಸತೇನೋ = ಪೊಸತು + ಏನೋ ಎಲರನು = ಗಾಳಿಯನು // ಉಚ್ವಾಸವು = ಶ್ವಾಶದ ಗಾಳಿ // ಪೋಸತೇನೋ = ಹೊಸದೇನೋ? ಪುಲಿಸಿಂಘದುಚ್ವಾಸ, ಹಸು ಹುಲ್ಲೆ ಹಯದುಸಿರು | ಹುಳು ಹಾವಿಲಿಯಸುಯ್ಲು, ಹಕ್ಕಿ ಹದ್ದುಯ್ಲು || ಕಲೆತಿರ್ಪುವೀಯಲ್ಲ ನಾಮುಸಿರ್ವೆಲರಿನಲಿ | ಕಲಬೆರಕೆ ಜಗದುಸಿರು – ಮಂಕುತಿಮ್ಮ || 131
Jul 10, 2021
6 min
Load more