Dr. Sri Ramachandra Guruji
Dr. Sri Ramachandra Guruji
Bharath Babu R
Dr. Sri Ramachandra Guruji is an internationally renowned Spiritual Master and pioneer in Past life Regression Therapy, Psycho-Spiritual Hypnotherapy, Healing, and Hanuman Chalisa. He has invented and introduced various healing and relaxation techniques. He has personally conducted more than 10,000 past life regressions and more than 2000 workshops throughout the globe. Millions of people have benefited through his workshops.
Kshama yajna
Forgive everyone.
Jul 7, 2021
15 min
ತ್ರಿತಂತ್ರ ಶೋಧಿತ ಸತ್ಯ Triple filter test Yoglet -7 || by Dr Sri #Ramachandra​ Guruji.
ಮನುಷ್ಯನ ಅಭ್ಯುದಯಕ್ಕೆ ಆಹಾರಪದ್ದತಿಯು ಕೊಡುಗೆ ನೀಡುವುದೆಂದಾದರೆ, ಹೊಟ್ಟೆಗೆ ನೀಡುವ ಆಹಾರಕ್ಕಿಂತ ಇಂದ್ರಿಯಗಳಿಗೆ ಉಣಬಡಿಸುವ ಆಹಾರವು ಬಹಳಷ್ಟು ಮುಖ್ಯವಾದ  ಪಾತ್ರ ವಹಿಸುತ್ತದೆ. ಆ ಇಂದ್ರಿಯಗಳಲ್ಲಿ ಒಂದಾದ  ಕರ್ಣೇoದ್ರಿಯಕ್ಕೆ ನಾವು ಎಂತಹ ವಿಚಾರದಾಹಾರವನ್ನು ಉಣಬಡಿಸುತ್ತೇವೆ ಎಂಬುದು ನಮಗೆ ತಿಳಿದಿರುವುದಿಲ್ಲ.   ಮಾನವನು ಜೀವನವೆಂಬ ರಹದಾರಿಯಲ್ಲಿ ಸಂಚರಿಸುವಾಗ ಬುದ್ಧಿಯೆಂಬ ಕಂದೀಲು ಬೆಳಕನ್ನು ಆಶ್ರಯಿಸುವುದಕ್ಕಿಂತ ಭಾವನೆಗಳ ಬುಡ್ಡೀದೀಪದ ಮೊರೆ ಹೋಗುತ್ತಾನೆ. ಕೇಳಿದ ವಿಚಾರಗಳನ್ನೆಲ್ಲಾ ಸತ್ಯವೆಂದು ಒಪ್ಪಿಕೊಂಡು ಅಂತೆಯೇ ಅವಸರದ ನಿರ್ಧಾರಗಳನ್ನು ಕೈಗೊಂಡು ಮೌಲ್ಯಯುತವಾದ ಸಂಬಂಧಗಳಿಗೆ ತಿಲಾಂಜಲಿ ಹೇಳಿ ಅನಾಹುತಗಳನ್ನು ಮಾಡಿಕೊಳ್ಳುವ ನಮಗೆ ಇಲ್ಲಿ ವಿವರಿಸಲಾಗಿರುವ ತಂತ್ರವು ಇದರಿಂದ ಹೊರಬರಲು ಸಹಾಯಮಾಡುತ್ತದೆ.   ನಾವು ಶ್ರವಣಿಸುವ ವಿಚಾರಗಳನ್ನು ಆಲಿಸಿ, ಪರಿಶೀಲಿಸಿ ಮತ್ತು ಶೋಧಿಸಿ ಸತ್ಯವನ್ನು ತಿಳಿದುಕೊಳ್ಳುವ ಉಪಾಯದ ಬಗ್ಗೆ ಅರಿವುಮೂಡಿಸುವ ಪ್ರಯತ್ನವೇ “ಡಾ.ಶ್ರೀ ರಾಮಚಂದ್ರ ಗುರೂಜಿ”ಯವರ ಈ “ತ್ರಿತಂತ್ರ ಶೋಧಿತ ಸತ್ಯ” ಎಂಬ Yoglet ನ 7 ನೆಯ ಮಾಲಿಕೆ.
Apr 3, 2021
8 min
ಎಲ್ಲೋ ಹುಡುಕಿದೆ ಇಲ್ಲದ ದೇವರ Yoglet - 6 || by Dr Sri Ramachandra Guruji
ಮಾನವನು ಎಲ್ಲಾ ವಿಷಯಗಳಲ್ಲೂ ಮುಂದುವರೆದಿದ್ದಾನೆ, ಎಲ್ಲವನ್ನೂ ಗೆದ್ದು ಅಸಾಧ್ಯಗಳನ್ನು ಸಾಧಿಸುತ್ತಾ ಬಂದಿದ್ದಾನೆ, ಬಾಹ್ಯ ಜಗತ್ತಿನ ಎಲ್ಲಾ ವಿದ್ಯಮಾನಗಳನ್ನು ಅರಿಯುತ್ತಾನೆ. ಆದರೆ ತನ್ನನ್ನು ತಾನು ಅರಿಯುವುದರಲ್ಲಿ ವಿಫಲನಾಗಿ ತನ್ನ ಅಂತರಾಳದಲ್ಲಿ ಅವಿತಿರುವ ಅಪರಿಮಿತ ಆತ್ಮಾನಂದವನ್ನು ಅನುಭವಿಸದೇ ಆನಂದವನ್ನು ಹೊರಜಗತ್ತಿನಲ್ಲೇ ಹುಡುಕುವ ಅರೆಮರುಳುನಾಗಿದ್ದಾನೆ.
Apr 2, 2021
5 min
"ಆರೋಗ್ಯವೇ ಮಹಾಭಾಗ್ಯ" [Yoglet - 5] || by Dr Sri Ramachandra Guruji
#Yoglet​-5" ಆರೋಗ್ಯವೇ ಮಹಾಭಾಗ್ಯ" ಹಿತ್ ಭುಕ್, ಮಿತ್ ಭುಕ್, ಋತ್ ಭುಕ್ ಎಂದರೆ ಹಿತವಾದ ಸಾತ್ವಿಕವಾದ ಆಹಾರವನ್ನು ಮಿತವಾಗಿ ಸಮಯಕ್ಕೆ ಸರಿಯಾಗಿ ಭುಜಿಸುವುದೇ ಆರೋಗ್ಯದ ಗುಟ್ಟು ಎಂಬುದೇ ಆಯುರ್ವೇದದ ಆಹಾರನೀತಿ.
Apr 1, 2021
7 min
ಸಪ್ತ ಯಾಗಗಳು (Sapthayagagalu ) #yoglet - 4
#"ಮನೋಜನ್ಯ ಸಪ್ತ ಯಾಗಗಳು"  #ಸಪ್ತಯಾಗಗಳು ಸಪ್ತ ಯಾಗಗಳು ಅಂತ ಅಂದ್ರೆ ಯಾಗದ ನೆಪದಲ್ಲಿ ಪ್ರಾಣಿಗಳನ್ನು  ಪಕ್ಷಿಗಳನ್ನು ಕೋಳಿಗಳನ್ನು ಬಲಿಕೊಡುವುದಲ್ಲ ನಮ್ಮ ಮನಸ್ಸಿನಲ್ಲಿ ಇರುವಂತಹ ಪ್ರಾಣಿಜನ್ಯ  ಗುಣಗಳನ್ನು ಜ್ಞಾನ ಅಗ್ನಿಗೆ ಬಲಿಕೊಡಬೇಕು ಆಗ ನಾವು ಧನ್ಯ ರಾಗುತ್ತೇವೆ ಪುನೀತರಾಗಿ  ಜ್ಞಾನಿಗಳ ಆಗುತ್ತೇವೆ ಅನ್ನುವುದು ನಮ್ಮ ಪ್ರಾಚೀನರ ಅಭಿಪ್ರಾಯವಾಗಿತ್ತು.
Feb 10, 2021
12 min
ಚತುರೋಪಾಯಗಳು (Yoglet - 3) || by Dr Sri Ramachandra Guruji
ಚತುರೋಪಾಯಗಳು (Yoglet - 3) || by Dr Sri Ramachandra Guruji
Jan 20, 2021
13 min
Paanchaliyolu panchendriyangalu (ಪಾಂಚಾಲಿಯೊಳು ಪಂಚೇಂದ್ರಿಯಂಗಳು) Yoglet - 2.
ದ್ರುಪದನ ಸುತೆ ಪಾಂಡು ಸುತರೈವರ ಸತಿ .. ಪಂಚೇಂದ್ರಿಯಗಳೊಡತಿ ಪಂಚರೊಳೀ ಮಹಾಪತಿವ್ರತೆ..  ಯಮಸುತಂಗಿತ್ತಳು ಮಧುರ ಗಾನದಿ ಕರ್ಣೇಂದ್ರಿಯಂಗೆ ಸೊಗವನು.. ಸೌಗಂಧವನರುಹಿ ಪರಿಮಳದಿ ವಾಯುಪುತ್ರನೊಡನೆ ಸಲ್ಲಾಪಂಗೈದಳು ನಾಸಿಕದಿ.. ನಿಸರ್ಗದೊಳಾನಂದದಿ ಫಲ್ಗುಣನೊಡಗೂಡಿ ಸರಸವನೆಸಗಿ ತಣಿಸಿದಳು ಚಕ್ಷೇಂದ್ರಿಂಯಂಗಂದದಿ.. ಭಕ್ಷ್ಯವನಿತ್ತು ಭೋಜನಾಸ್ವಾದದಿ ಜಿಹ್ವೇಂದ್ರಿಯ ನಕುಲನೆನಸಿಹಳು.. ಶಿಶುವಿನೋಪಾದಿಯಲಿ ಆಲಂಗಿಸಿ ಸಹದೇವನಿಂ ಸೊಗಯಿಸಿದಳು.. ಚಿತ್ತಶುದ್ಧಿಯಿಂ,ಭಾವಶುದ್ಧಿಯಿಂ  ಪಂಚೇಂದ್ರಿಯಂಗೊಡತಿ  ಪಂಚ ಮಹಾಪತಿವ್ರತೆಯಿವಳು ಪಾಂಚಾಲರಸನ ಪ್ರಿಯ ಕುವರಿ..
Jan 19, 2021
12 min
Yoglet - 1 panchopachara pooje (ಪಂಚೋಪಚಾರ ಪೂಜೆ )
ಪಂಚೋಪಚಾರ ಪೂಜೆ ನಮ್ಮ ಹಿರಿಯರು ಕಂಡುಹಿಡಿದಿರುವ ಒಂದು ಅದ್ಬುತ ಸಾಧನ.  ಮೋಕ್ಷದ ದಾರಿಗೆ ಎರಡು ವಿಧಾನ  1 - ಸಗುಣೋಪಾಸನೆ  2 - ನಿರ್ಗುಣೋಪಾಸನೆ   ನಮ್ಮ ಮನಸ್ಸು ಪಂಚೇಂದ್ರಿಯಗಳ ಮೂಲಕ ಕೆಲಸ ಮಾಡುತ್ತದೆ.  ಆದ್ದರಿಂದ ನಮ್ಮ ಹಿರಿಯರು ಕಣ್ಣಿಗೆ ವಿಗ್ರಹ, ಕಿವಿಗಳಿಗೆ ಗಂಟೆಯ ಶಬ್ದ, ಮೂಗಿಗೆ  ಪರಿಮಳ ಬರಿತ ಸುವಾಸನೆ, ಚರ್ಮಕ್ಕೆ ಗಂಧ ಅಥವಾ ತಿಲಕ, ಹಾಗೆ ನಾಲಿಗೆಗೆ  ನೈವೇದ್ಯವನ್ನು ಕೊಟ್ಟು ಉಪಚರಿಸಿದರು.   ಇದನ್ನು ಮಾಡುವ ಮೂಲಕ ನಮ್ಮ ಇಂದ್ರಿಯಗಳನ್ನು ಗೆದ್ದು ನಂತರ ಆಳ ಧ್ಯಾನಕ್ಕೆ  ತೆರಳುತ್ತಿದ್ದರು.   ಇದುವೇ ಪೊಚೋಪಚಾರದ ಕೊಡುಗೆ ನಮ್ಮ ಹಿರಿಯರಿಂದ. Watch video : https://youtu.be/9M873PnYpvU
Jan 18, 2021
9 min
ಧ್ಯಾನ ಮಾಡುವ ವಿಧಾನ (How to meditate?)
ಧ್ಯಾನ ಮಾಡುವ ವಿಧಾನ (How to meditate?)
Jan 18, 2021
36 min
Age Regression Meditation
Age Regression Meditation.
Jan 13, 2021
51 min
Load more