ಶಿವಶರಣ
ಶಿವಶರಣ
Shivasharanappa Maddur
ಬಸವ ಪಂಚಮಿ Basava Panchami 25 Jul 2020
47 minutes Posted Jul 28, 2020 at 3:31 pm.
0:00
47:35
Download MP3
Show notes

ಬಸವ ಪಂಚಮಿ Basava Panchami 25 Jul 2020 Conference Call Podcast

ಆನಂದ ನಾಮ  ಸಂವತ್ಸರದ ( ಕ್ರಿ ಶ 1134) ವೈಶಾಖ ಮಾಸದ ಅಕ್ಷಯ ತೃತೀಯ ದಂದು ಜನಿಸಿದ ಬಸವಣ್ಣನವರು

ನಳನಾಮ ಸಂವತ್ಸರದ (ಕ್ರಿ ಶ 1196) ಶ್ರಾವಣ ಮಾಸದ ಪಂಚಮಿ ಯಂದು ಕಪ್ಪಡಿ ಸಂಗಮದಲ್ಲಿ  ಲಿಂಗೈಕ್ಯವಾದುದರಿಂದ ಶ್ರಾವಣ ಪಂಚಮಿಯು ಬಸವ ಪಂಚಮಿ ಎಂದೇ ಖ್ಯಾತಿವೆತ್ತಿದೆ.

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ ಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ194

ನೀರ ಕಂಡಲ್ಲಿ ಮುಳುಗುವರಯ್ಯಾ, ಮರನ ಕಂಡಲ್ಲಿ ಸುತ್ತುವರಯ್ಯಾ. ಬತ್ತುವ ಜಲವ, ಒಣಗುವ ಮರನ ಮಚ್ಚಿದವರು ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ.

ಆಕಾರ ನಿರಾಕಾರವಾಯಿತ್ತಲ್ಲಾ ಬಸವಣ್ಣ. ಪ್ರಾಣ ನಿಃಪ್ರಾಣವಾಯಿತ್ತಲ್ಲಾ ಬಸವಣ್ಣ. ಅಂಗಜಂಗಮದ ಮಾಟ ಸಮಾಪ್ತಿಯಾಯಿತ್ತಲ್ಲಾ ಬಸವಣ್ಣ. ನಿಃಶಬ್ದವೇದ್ಯವಾದೆಯಲ್ಲಾ ಬಸವಣ್ಣ. ಕಲಿದೇವರದೇವನ ಹೃದಯಕಮಲವ ಹೊಕ್ಕು, ದೇವರಿಗೆ ದೇವನಾಗಿ ಹೋದೆಯಲ್ಲಾ ಸಂಗನಬಸವಣ್ಣ.