Show notes
ದೀಪ ಮಾತಾಡುವದಿಲ್ಲ ಅದರ ಬೆಳಕು ದೀಪದ ಪರಿಚಯ ನೀಡುತ್ತೆ. ಒಳ್ಳೆಯ ಕೆಲಸ ಮಾಡ್ತಾ ಇರಿ, ಅದೇ ನಿಮ್ಮ ಪರಿಚಯ ನೀಡುತ್ತೆ. ಒಬ್ಬ ವ್ಯಕ್ತಿ ಕೇಳುತ್ತಾನೆ – ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಲು ಏನು ಮಾಡಬೇಕು? ಆಗ ಒಬ್ಬ ಜ್ಞಾನಿ ಹೇಳುತ್ತಾನೆ ‘ಕಾಲು ಎಳೆಯುವುದು ಬಿಟ್ಟು ಕೈಯನ್ನು ಎಳೆಯಬೇಕು’ ಎಂದು. ಇದೇ ಜೀವನ! ಸೋಲು ಗೆಲವು ಅನ್ನೋದು ಓಡು ತ್ತಿರುವ ಎರಡು ಕಾಲುಗಳಂತೆ, ಬದಲಾಗೋದಕ್ಕೆ ಒಂದು ಸೆಕೆಂಡ್ ಸಾಕು.


