ಸದ್ಗುರು ಕನ್ನಡ Sadhguru Kannada
ಸದ್ಗುರು ಕನ್ನಡ Sadhguru Kannada
Sadhguru Kannada
ಪ್ರೇಮ ನಿವೇದನೆ ಮಾಡಲು ಆತ್ಮ ವಿಶ್ವಾಸ ತಂದುಕೊಳ್ಳೋದು ಹೇಗೆ? Love Confession Kannada | Sadhguru Kannada
7 minutes Posted Sep 24, 2023 at 12:30 am.
0:00
7:06
Download MP3
Show notes
ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ ,
ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ.
ಪ್ರೀತಿ, ಪ್ರೇಮ ನಿವೇದನೆ, ಇವೆಲ್ಲ ಕಾಲೇಜು ಹುಡುಗರ ಜೀವನದಲ್ಲಿ ದಿನವೂ ಪ್ರಸ್ತಾಪಿಸಲ್ಪಡುವ ವಿಷಯ. ಅವರ ಖುಷಿಗೆ, ದುಃಖಕ್ಕೆ ಕಾರಣವಾಗುವ ಪ್ರಮುಖ ವಿಷಯಗಳಲ್ಲಿ ‘ಪ್ರೀತಿ’ ಒಂದು. ‘ಐ ಲವ್ ಯು’ ಎಂಬ ಒಂದು ವಾಕ್ಯದಿಂದ, ಕಾಲೇಜು ಹುಡುಗ-ಹುಡುಗಿಯರು ಭಾವನೆಗಳ ದೊಡ್ಡ ತುಮುಲಗಳಿಗೂ ಈಡಾಗುತ್ತಾರೆ. ಈ ವಯಸ್ಸಿನಲ್ಲಿ ಪ್ರೀತಿ ಮಾಡುವುದು ಸರಿಯೇ? ತಪ್ಪೇ? ಪ್ರೀತಿಯನ್ನು ಪ್ರೀತಿಸಿದವರಿಗೆ ತಿಳಿಸುವುದು ಹೇಗೆ? ಎಂಬ ಪ್ರಶ್ನೆಗಳು ಅವರಲ್ಲಿರುತ್ತವೆ. ಈ ವಿಡಿಯೋದಲ್ಲಿ ಇದೇ ಪ್ರಶ್ನೆಯನ್ನು ಹುಡುಗನೊಬ್ಬ ಸದ್ಗುರುಗಳನ್ನು ಕೇಳುತ್ತಾನೆ. ಉತ್ತರವನ್ನು ಕೇಳಿ!
ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ.
See omnystudio.com/listener for privacy information.
Learn more about your ad choices. Visit megaphone.fm/adchoices