
ಅಪಾಯಕಾರಿ ತ್ಯಾಜ್ಯ
ಗಳ ಮರುಬಳಕೆ ಘಟಕಗಳು ಮತ್ತು ಕೆಲವು ಸ್ವರೂಪದ ಉಷ್ಣ ವಿದ್ಯುತ್ ಸ್ಥಾವರಗಳ ಕಾರ್ಯಾರಂಭಕ್ಕೆ ಮುನ್ನ,
ಪರಿಸರ ನಿಯಮ ಪಾಲನೆಗೆ ಸಂಬಂಧಿಸಿ ‘ಪೂರ್ವಾನುಮತಿ’ ಪಡೆಯುವು
ದರಿಂದ ವಿನಾಯಿತಿ ನೀಡುವ ನಿಯಮ
ರೂಪಿಸಲು ಕೇಂದ್ರ ಸರ್ಕಾರ ಮುಂದಾ
ಗಿದೆ. ಇದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ಸರ್ಕಾರವು ಮೇ ತಿಂಗಳಿನಲ್ಲಿಯೇ ಹೊರಡಿಸಿದೆ.
ಈ ಉದ್ದೇಶಕ್ಕಾಗಿ ‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಅಧಿಸೂಚನೆ–2006’ಕ್ಕೆ ಅಗತ್ಯ ತಿದ್ದುಪಡಿ
ಯನ್ನು ಮಾಡಿ, ‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಕರಡು ಅಧಿಸೂಚನೆ–2020’ ಅನ್ನು ಸರ್ಕಾರ ಸಿದ್ಧಪಡಿಸಿದೆ. ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು, ಕೈಗಾರಿಕೆಗಳು, ರಕ್ಷಣಾ ಯೋಜನೆಗಳ ಅನುಷ್ಠಾನದಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಅಧ್ಯಯನ ಮತ್ತು ವಿಶ್ಲೇಷಣೆಗೆ 2006ರ ಅಧಿಸೂಚನೆ ಅನುವು ಮಾಡಿಕೊಡುತ್ತದೆ. 2006ರ ಅಧಿಸೂಚನೆಯಲ್ಲಿ ಇರುವ ನಿಯಮಗಳಲ್ಲಿ ಕೆಲವನ್ನು ಬದಲಾವಣೆ ಮಾಡಿ, 2020ರ ಕರಡು ಅಧಿಸೂಚನೆಯನ್ನು ರೂಪಿಸಲಾಗಿದೆ.
Aug 16, 2020
9 min
