ಶಿವಶರಣ
ಶಿವಶರಣ
Shivasharanappa Maddur
ವಚನಾನುಭಾವ-ದಿನಾಂಕ 18 ಜುಲೈ 2020-ಭಾಗ 2
38 minutes Posted Jul 31, 2020 at 3:44 pm.
0:00
38:24
Download MP3
Show notes

ವಚನಾನುಭಾವ ದಿನಾಂಕ 18 ಜುಲೈ 2020- ಭಾಗ 2 

ಜಾಗತಿಕ ಅನುಭಾವ ಮಂಟಪದಲ್ಲಿ ಚರ್ಚೆಯ ವಿಷಯ: ಭ್ರಾಂತಿನ ಭ್ರಮೆ, ಶರಣ ತತ್ವ,  ಉದಯ, ಅಂದಿಂಗೆಳೆಯ ನೀನು ಹಳೆಯ ನಾನು, 36 ತತ್ವಗಳ ಚಾರ್ಟ್.

ಚಿಂತನೆ: ಶಿವಶರಣಪ್ಪ ಮದ್ದೂರ್

Jagatika Anubhaava Mantapa Conference Call Date 18 July 2020

Discourse by: Shivasharanappa Maddur.

ನಿರ್ವಾಚಿಸಲ್ಪಟ್ಟ ವಚನ:

ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ?

ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ ?

ನಾನರಿದೆನೆಂಬಾತ ಇದಿರ ಕೇಳಲುಂಟೆ ?

ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು

ಮಾತಿನ ಮಾತಿನೊಳಗೆ ಅರಿವೆಂಬುದುಂಟೆ ?

ಸೂತಕ ಹಿಂಗದೆ ಸಂದೇಹವಳಿಯದೆ,

ಮುಂದಣ ಸೂಕ್ಷ್ಮವ ಕಾಬ ಪರಿಯೆಂತೊ?

ಜ್ಯೋತಿಯ ಬಸಿರೊಳಗೆ ಜನಿಸಿದ

ಕಾಂತಿಯುತ ಬೆಳಗು ಗುಹೇಶ್ವರಾ ನಿಮ್ಮ ಶರಣ !

2. ಆದಿ ಆಧಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು

ಸುರಾಳನಿರಾಳವಿಲ್ಲದಂದು, ಸಚರಾಚರವೆಲ್ಲ ರಚನೆಗೆ ಬಾರದಂದು,

ಗುಹೇಶ್ವರಾ ನಿಮ್ಮ ಶರಣನುದಯಿಸಿದನಂದು.

3. ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ,

ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ !
ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು